ನಿನ್ನೆ ರಾತ್ರಿ ಒಮ್ಮಿಂದೊಮ್ಮಿಲೇ…’ರ್ರಿ…ನನ್ನ ಕಡೆ ಒಂದು ಬಿಳಿ ಸೀರಿನ ಇಲ್ಲಾ…ನಾಳೆಗೆ ಬಿಳಿ ಸೀರಿ ಬೇಕಾಗಿತ್ತ…’ ಅಂತ ನಮ್ಮಕಿ ಶುರು ಮಾಡಿದ್ಲು. ನಾ ಏನ ಅಕಿ ಕೇಳಿದಾಗೊಮ್ಮೆ ಕೇಳಿದ್ದ ಕಲರ್ ಸೀರಿ ಕೊಡ್ಸೋರ ಗತೆ’ಮೊನ್ನೇ ಹೇಳ್ಬಿಕಿತ್ತಿಲ್ಲ, ಹೆಂಗಿದ್ದರೂ ಬರ್ಥಡೇ ಇತ್ತ ಅವತ್ತ ಕೊಡಸ್ತಿದ್ದೆ’...
’ಏ..ಇವತ್ತಿಗೆ ನೀ ಹುಟ್ಟಿ ನಲ್ವತ್ತೈದ ವರ್ಷ ಆತ ನಿಂಗ ಹೆಂಗ ಅನಸ್ತದ….’ ಅಂತ ನಮ್ಮಕಿನ ನಾ ಕೇಳಿದರ ಅಕಿ’ಹುಟ್ಟಿದ್ದಕ್ಕೋ ಇಲ್ಲಾ ನಿಮ್ಮನ್ನ ಕಟಗೊಂಡಿದ್ದಕ್ಕೋ…’ ಅಂತ ಕೇಳಿದ್ಲು…’ಲೇ..ಇವತ್ತ ಹುಟ್ಟಿದ್ದರ ಬಗ್ಗೆ ಹೇಳ….anniversary ಇದ್ದಾಗ ನನ್ನ ಕಟಗೊಂಡಿದ್ದರ ಬಗ್ಗೆ ಹೇಳೊ ಅಂತಿ….’ ಅಂತ ನಾ...
ಇವತ್ತಿಗೆ ಪಕ್ಷ ಮಾಸ ಮುಗದಂಗ ಆತ….ಮೊನ್ನೆ ದಶಮಿ ತಿಥಿ ದಿವಸ ನಮ್ಮಪ್ಪನ ಪಕ್ಷ ಮಾಡ್ಲಿಕ್ಕೆ ಹೋದಾಗ ನಡೆದ ಒಂದಿಷ್ಟ ಪ್ರಸಂಗ ಪ್ರಹಸನ ರೂಪದಾಗ…ಗುಡಿ ಒಳಗ ನಮ್ಮಪ್ಪನ ಪಕ್ಷದ ಜೊತಿ ಇನ್ನ ಎಂಟ ಮಂದಿ ಪಕ್ಷ ಇತ್ತ…ಪಕ್ಷ ಮಾಡಸಲಿಕ್ಕೆ ಬಂದ ರಾಮಭಟ್ಟರ ಅಗದಿ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...