ನಿನ್ನಿಗೆ ನಮ್ಮ facebookಗೆ ಎಂಟ ತುಂಬಿ ಒಂಬತ್ತರಾಗ ಬಿತ್ತು. ನಾವು ಲೋಕಲ್ ಫೆಸಬುಕ್ ಗೆಳ್ಯಾರೆಲ್ಲಾ ಸೇರಿ ಅದರ ಬರ್ಥಡೆ ಸೆಲೆಬ್ರೇಟ್ ಮಾಡಿದ್ವಿ. ಇತ್ತೀಚಿಗಂತೂ ‘facebook ’ ನಮಗೆಲ್ಲಾ ಒಂದ ಕೆಟ್ಟ ಚಟಾ ಆಗಿಬಿಟ್ಟದ. ನನಗಂತೂ ಎದ್ದ ಕೂಡಲೇನ ಕ್ಯಾಮಾರಿಲೇ ಮೊದಲ ಕಂಪ್ಯೂಟರನಾಗ...
ಡಿಸೆಂಬರ್ ೨೯ ರ ರಾತ್ರಿ ನಮ್ಮ ಎಮ್. ಎಲ್. ಏ ಮಾಮಾ ಹನ್ನೆರಡ ಆದ್ರು ಮಲ್ಕೋಳ್ಳಲಾರದ ಟಿ.ವಿ ಮುಂದ ಕೂತಿದ್ದಾ ” ಮಾಮಾ ಇವತ್ತ ಹೊಸ ವರ್ಷ ಅಲ್ಲಾ ಹೋಗಿ ಮಲ್ಕೊ , ಹೊಸಾ ವರ್ಷಕ್ಕ ಇನ್ನೂ ಎರಡ ದಿವಸ ಅದ...
ಮೊನ್ನೆ ಪೋಸ್ಟನಿಂದ ಒಂದ ಇಂಟರನ್ಯಾಶನಲ್ ಇಂಗ್ಲೆಂಡ ಕವರ ಬಂತು, ಅದು ಅಮೇರಿಕಾದಿಂದ, ನನ್ನ ಹೆಂಡತಿ ಹೆಸರಿನ ಮ್ಯಾಲೆ. ನಂಗ ’ಇದೇನಪಾ ನಂಗಿಷ್ಟ ಅಮೇರಿಕಾದಾಗ ಫ್ಯಾನ್ಸ ಇದ್ದಾರ ಅಂತ ಅನ್ಕೊಂಡರ ಅಕಿಗೂ ಫಾರೇನದಾಗ ಫ್ಯಾನ್ಸ ಆಗ್ಯಾರಿನ’ ಅಂತ ಅನಸಲಿಕತ್ತ. ಹಂಗ ಲೆಟರ್ ಮ್ಯಾಲೆ...
ಇದ ಮೊನ್ನೆ ಒಂದ ಹದಿನೈದ ದಿವಸದ ಹಿಂದಿನ ಮಾತ ಇರಬೇಕ, ನಮ್ಮ ಬೆಂಗಳೂರ ದೋಸ್ತ ಒಬ್ಬಂವಾ ಫೇಸಬುಕ್ಕಿನಾಗ capital ಅಕ್ಷರದಲೇ I QUIT ಅಂತ ಬರದ ಒಂದ status message ಹಾಕಿದ್ದಾ. ನಾ ಅದನ್ನ ನೋಡಿದವನ ಖರೇನ ಗಾಬರಿ ಆಗಿಬಿಟ್ಟೆ. ನಂಗ...
ಮೊನ್ನೆ ಮುಂಜ ಮುಂಜಾನೆ ನಾ ಇನ್ನೇನ ಗಾಡಿಗೆ ಕಿಕ್ ಹೊಡದ ಆಫೀಸಿಗೆ ಹೋಗಬೇಕ ಅಂತ ಗೇಟ ತಗಿಯೊದಕ್ಕ ಕಿಲ್ಲೇದಾಗಿನ ಗಾಯತ್ರಿ ಮೌಶಿ ಆಟೊ ತಗೊಂಡ ಇಳದ್ಲು, ಅಕಿ ಬಂದಿದ್ದ ಸ್ಪೀಡ್ ನೋಡಿದರ ಏನೋ ಎಮರ್ಜನ್ಸಿ ಆಗಿರಬೇಕ ಅಂತ ’ಏನ ಆತ ಮೌಶಿ,...
ನಾ ಮದುವಿ ಮಾಡ್ಕೊಂಡ ಹೊಸ್ತಾಗಿ ಗಾಂಧಿನಗರದಾಗಿನ ಡಬಲ್ ಬೆಡ್ ರೂಮ್ ಮನಿಗೆ ಶಿಫ್ಟ ಆಗಿದ್ದೆ. ಹಂಗ ಮನಿ ಎಲ್ಲಾ ಛಲೋ ಇತ್ತ ಆದರ ಆ ಮನ್ಯಾಗ ಜೊಂಡಿಗ್ಯಾ, ಹಲ್ಲಿ, ಇಲಿ, ಕಪ್ಪಿ ಸಿಕ್ಕಾ ಪಟ್ಟೆ ಇದ್ವು. ನನ್ನ ಹೆಂಡತಿಗೆ ಹಲ್ಲಿ ಒಂದ...
ನನ್ನ ಹೆಂಡತಿಗೆ ಮೊದ್ಲ ಮೊದ್ಲ ಈ ಹ್ಯಾಷ ಟ್ಯಾಗ್ ಅಂದರು ಏನು? ಅದನ್ನ ಯಾಕ ಹಾಕ್ತಾರ ಅಂತ ಗೊತ್ತ ಆಗತಿದ್ದಿಲ್ಲಾ, ಅಕಿ ಯಾರರ ಫೇಸಬುಕ್ಕಿನಾಗ ಇಲ್ಲಾ ಟ್ವಿಟ್ಟರನಾಗ ಇದನ್ನ ಹಾಕಿದ್ದರು ಅಂದರ, ಒಂದು ಅವರ ಟೈಪಿಂಗ್ ತಪ್ಪ ಮಾಡ್ಯಾರ (typo) ಇಲ್ಲಾ...
ಇದ ಹೋದ ವರ್ಷ ಡಿಸೆಂಬರದ ಮಾತ ಇರಬೇಕು, ಹಿಂಗ ಮನ್ಯಾಗ ಹರಟಿ ಹೊಡ್ಕೋತ ಕೂತಾಗ, ನಮ್ಮವ್ವ ಒಮ್ಮಿಂದೊಮ್ಮಿಲೇ “ಎಷ್ಟ ಲಗೂ ವರ್ಷ ಕಳಿತಪಾ ಪ್ರಶಾಂತಾ.. ದಿವಸ ಹೋಗಿದ್ದ ಗೊತ್ತಾಗಂಗಿಲ್ಲಾ ನೋಡ, ಹೋದ ವರ್ಷರ ನನಗ ೬೪ ತುಂಬಿದ್ವು ಈಗಾಗಲೇ ೬೫ ತುಂಬಿ...
ನಮ್ಮವ್ವಗ ಮೊದ್ಲಿಂದ ಯಾರ ಮನಿ ಮುಂದ ಬಂದ ಏನ ಬೇಡಿದ್ರು ಇಲ್ಲಾ ಅಂತ ಹೇಳಿ ಕಳಸಿ ಗೊತ್ತಿದ್ದಿಲ್ಲಾ, ಹಂಗ ಬೇಡೋರ ಬಂದಾಗ ನಿನ್ನಿ ಅನ್ನ ಉಳದಿದ್ದಿಲ್ಲಾ ಅಂದರ ಒಂದ ಹಿಡಿ ರೇಶನ್ ಅಕ್ಕಿ ಹಾಕಿ ’ನೀನ ಬಿಸಿ ಅನ್ನಾ ಮಾಡ್ಕೊಂಡ ಉಣ್ಣು’...
ನಿನ್ನೆ ಜನೇವರಿ ನಾಲ್ಕಕ್ಕ ಒಂದಿಷ್ಟ ದೇಶದಾಗ ಡೈವರ್ಸ್ ಡೇ ಅಂತ ಆಚರಿಸದರು. ಅವತ್ತಿನ ದಿವಸ ಅಗದಿ ಪ್ರಶಸ್ತ ಅಂತ ಡೈವರ್ಸ್ ಕೊಡಲಿಕ್ಕೆ, ನಾವ ಹೆಂಗ ನಮ್ಮ ದೇಶದಾಗ ಅಕ್ಷತ್ರೀತಿಯಾ ದಿವಸ ಮೂಹರ್ತ ನೋಡಲಾರದ ಮದುವಿ ಮಾಡ್ಕೋತೇವಿ ಮನಿ ಒಪನಿಂಗ ಮಾಡ್ತೇವಿ ಹಂಗ....
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...