ನಾವ ಸಣ್ಣವರ ಇದ್ದಾಗಿನ ಮಾತ, ಆಗ ಮಳೆಗಾಲದಾಗ ಮಳೆ ಆಗಲಾರದ ಬರಗಾಲ ಬಂದ್ರ ಊರ ಹಿರಿಯಾರ ಕೂಡಿ ಕತ್ತೆ ಲಗ್ನ ಮಾಡಿ ಊರತುಂಬ ಮೆರವಣಗಿ ಮಾಡ್ತಿದ್ದರು. ಆ ಜೋಡ ಕತ್ತೆ ಹಿಂದ ನಮ್ಮಂತಾ ಒಂದ ಹತ್ತ ಹನ್ಯಾರಡ ಕತ್ತೆ ಕಾಯೋ ಹುಡ್ಗುರು...
ಇದ ಒಂದ ನಾಲ್ಕ ತಿಂಗಳದ ಹಿಂದಿನ ಮಾತ ಇರಬೇಕ, ನಮ್ಮ ತಂಗಿ ಅತ್ತಿ ಮನ್ಯಾಗಿನ ಶ್ರೀಮಂತ ಮುಗಿಸಿಕೊಂಡ ಹಡಿಲಿಕ್ಕೆ ಅಂತ ಗಂಡನ ಮನ್ಯಾಗಿಂದ ಗುಡಚಾಪಿ ಕಿತಗೊಂಡ ನಮ್ಮ ಮನಿಗೆ ಬಂದ ಟೆಂಟ್ ಹಾಕಿದ್ಲು. ಹಂಗ ಅಕಿವು ಲಗ ಭಗ ಎಷ್ಟ ನಮೂನಿ...
ನನಗ ಚಸ್ಮಾ(ಕನ್ನಡಕ) ಬಂದ ಇಪ್ಪತ್ತ ವರ್ಷ ಆಗಲಿಕ್ಕೆ ಬಂತ. ನಾ ಕೆ.ಇ.ಸಿ ಇಂಟರ್ವಿವಗೆ ಹೋದಾಗ ಡಾಕ್ಟರ ಚೆಕ್ ಮಾಡಿ ಹೇಳಿದ್ದರು ’ತಮ್ಮಾ, ನಿಂದ ದೂರ ದೃಷ್ಟಿ ಸರಿ ಇಲ್ಲಾ’ ಅಂತ. ಹಂಗ ನಂಗ ಹತ್ತರಿಂದ ಎಲ್ಲಾ ಕರೆಕ್ಟ ಕಂಡರೂ ದೂರಿಂದ ಕರೆಕ್ಟ...
ಹಂಗ ದಿವಸಾ ಮುಂಜಾನೆ ಏಳಬೇಕಾರ ಮೊಬೈಲನಾಗಿನ ಅಲರಾಮ ಹೊಯ್ಕೊಂಡ ಕೂಡಲೇ ಅದನ್ನ ಸ್ನೂಜ್ ಮಾಡಿ (ಮುಂದೂಡಿ) ಮಲ್ಕೊಳೊ ಚಟಾ ನಂದ. ಆ ಮೊಬೈಲ ಒಂದ ಮೂರ ಸರತೆ ಹೊಯ್ಕೊಂಡ ಕಡಿಕೆ ತಾನ ಬಂದ ಆದರು ನನಗ ಖಬರ ಇರಂಗಿಲ್ಲಾ. ಕಡಿಕೆ ನನ್ನ...
ಇವತ್ತ ಬೆಳಿಗ್ಗೆ ಬೆಳಿಗ್ಗೆ ರಾಜಾ ಫೋನ ಮಾಡಿದಾ, ಪಾಪ ಅವನ ಹೆಂಡತಿ ದಿಂದಾಗ ಇದ್ಲು, ಒಂದ ವಾರದಿಂದ ಇವತ್ತ ನಾಳೆ ಇವತ್ತ ನಾಳೆ ಅಂತ ನಡದಿತ್ತು, ನಾನು ತಾಸ ತಾಸಿಗೊಮ್ಮೆ ಆತೇನು ಆತೇನು ಅಂತ ಕೇಳಿ ಕೇಳಿ ಅವನ ಜೀವಾ ತಿನ್ನಲಿಕತ್ತಿದ್ದೆ....
ಹೋದ ವಾರ ದೀಪಾವಳಿ ಫರಾಳಕ್ಕ ನಮ್ಮ ಗೆಳ್ಯಾ ತಮ್ಮ ಮನಿಗೆ ಕರದಿದ್ದಾ , ಈ ಗೆಳ್ಯಾಗ ಹೆಸರ ಅದ, ಆದರ ಈ ಸರತೆ ಯಾಕೋ ಹೆಸರ ಬರೆಯೋದ ಅಷ್ಟ ಸರಿ ಅನಸವಲ್ತು , ಯಾಕ ಅನ್ನೋದ ನಿಮಗೂ ಆಮೇಲೆ ಲೇಖನಾ ಒದತಾ...
ಮೊನ್ನೆ ಹಂಪಿಗೆ ನಮ್ಮಜ್ಜನ ಧರ್ಮೋದಕ ಬಿಡಲಿಕ್ಕ ಹೋಗಿದ್ದೆ. ನದಿ ದಂಡಿ ಮ್ಯಾಲೆ ‘ಕಾಗಿ ಪಿಂಡ’ ರೆಡಿಮಾಡಿ ಕಾಗಿಗೆ ಅಹ್ವಾನ ಮಾಡಿದರು. ಒಂದ ಕಾಗಿನೂ ಅರ್ಧತಾಸ ಆದರೂ ಪಿಂಡದ ಹತ್ತರ ಹಾಯಲಿಲ್ಲಾ , ನಾವೇಲ್ಲಾ ಒದ್ದಿ ಪಂಜಿಲೆ ಇಂಥಾ ಥಂಡ್ಯಾಗ ಸಾಯ್ಕೋತ ಕಾಗಿ...
ಮನ್ನೆ ಮಧ್ಯಾಹ್ನ ದುಡದ ಸಾಕಾಗಿ ಬಂದ ದಣೇಯಿನ ಊಟಕ್ಕ ಕೂತಿದ್ದೆ. ಒಂದ ಸರತೆ ಸಾರೂ ಅನ್ನ ಉಂಡ, ಇನ್ನೇನ ಎರಡನೇ ಸರತೆ ಅನ್ನಕ್ಕ ಹುಳಿ ಹಾಕಸಿಗೋಬೇಕು ಅನ್ನೋದರಾಗ ನಮ್ಮವ್ವಾ ಅಡಗಿ ಮನ್ಯಾಗಿಂದ ಒಂದ ಕೈಯಾಗ ಸಾರಿನ ಸೌಟ ಹಿಡಕೊಂಡ “ಪ್ರಶಾಂತಾ, ಹೋದ...
ಒಂದ ೧೫ ವರ್ಷದ ಹಿಂದಿನ ಮಾತು, ನಮ್ಮ ದೊಸ್ತ ಅನಂತ ಸುಬ್ಬರಾವ ( ಅನಂತು) ಅವರ ಅಪ್ಪಾ ಅಂದರ ಸುಬ್ಬರಾವ ಭಟ್ಟರು ತಮ್ಮ ಅನಂತೂಗ ಬಿ.ಎಸ್.ಸಿ ಮಾಡಿದ ಮ್ಯಾಲೆ ಮೆಡಿಕಲ್ ರೆಪ್ ಕೆಲಸ ಸಿಕ್ಕಾಗ ತಮ್ಮ ಹೋಟೆಲಗೆ ಬಂದ ಅವರ ಗೆಳೆಯಾ...
ನಾಳೆ ನವೆಂಬರ್ ೧೪ಕ್ಕ ’ವಿಶ್ವ ಮಧುಮೇಹ ದಿವಸ’, ಅದರ ಸಂಬಂಧ ಒಂದ ವಾರದಿಂದ ನಮ್ಮ ದೋಸ್ತ ಬಂಕಾಪುರ ಡಾಕ್ಟರ್ ಡಯಾಬೀಟಿಸ್ ಕ್ಯಾಂಪ್ ಮಾಡಲಿಕತ್ತಾನ. ” ನೀವು ಗಂಡಾ ಹೆಂಡತಿ ಬಂದ ಪುಕ್ಕಟ ಚೆಕ್ ಮಾಡಿಸಕೊಂಡ ಹೋಗರಿ ” ಅಂತ ಅಂದಿದ್ದಾ. ಹಂಗ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...