ಇತ್ತೀಚಿಗೆ ಯಾಕೊ ಏನೋ ಗೊತ್ತಿಲ್ಲಾ ರಾತ್ರಿ ಮಲ್ಕೊಂಡಾಗ ಕೆಟ್ಟ ಕೆಟ್ಟ ಕನಸ ಭಾಳ ಬರಲೀಕತ್ತಾವ, ಸುಮ್ಮನ ನಮ್ಮ ವಿನಾಯಕ ಭಟ್ಟರಗೆ ಕೇಳಿ ಪಲ್ಲಂಗ ಬುಡಕ ಒಂದ ಹೋಮಾ ಹವನರ ಮಾಡಸಬೇಕೊ ಏನೊ ಗೊತ್ತಿಲ್ಲಾ. ’ಅಲ್ಲಾ, ಯಾಕ, ಏನಾತ ಕನಸಿನಾಗು ಹೆಂಡ್ತಿ ಬಂದಿದ್ಲೇನೊ?’...
ಮೊನ್ನೆ ನಮ್ಮ ಮನಿ ಆಂಟೀ “ರ್ರಿ, ನಮ್ಮ ಮಹಿಳಾ ಮಂಡಳದಾಗ ನಂಗ ‘ಒಬಿಸಿಟಿ ಡೇ’ ಕ್ಕ ಭಾಷಣಾ ಮಾಡಲಿಕ್ಕೆ ಕರದಾರ, ಒಂದ ಭಾಷಣಾ ಬರದ ಕೊಡ್ರಿ” ಅಂದ್ಲು. ಅಲ್ಲಾ, ಈ ಮಹಿಳಾ ಮಂಡಳದವರಿಗೇನ ತಲಿ-ಗಿಲಿ ಕೆಟ್ಟದನ, ಬ್ಯಾರೆ ಯಾರ ಸಿಗಲಿಲ್ಲೇನ ಭಾಷಣಕ್ಕ,...
(mother-in-law day ನಿಮಿತ್ತ ಬರೆದ ಲೇಖನ) ಅತ್ತಿಗೊಂದ ಕಾಲ,ಸೊಸಿಗೊಂದ ಕಾಲ ಅಂತಿದ್ದರಲಾ ಈಗ ಆ ಕಾಲ ಹೋತ. ಈಗೇನಿದ್ದರು ಅತ್ತಿಗೊಂದs ಕಾಲ. ಇನ್ನ ಅಕಿ ಮಗಳನ ಕಟಗೊಂಡ ಅಕಿ ಕೈಯಾಗ ಸಿಕ್ಕ ಸಾಯೋದ ಅಳಿಯಾಂದ ಕಾಲ. ಆ ಅಳಿಯಾ ಅನ್ನೋವಾ ಇವರಿಬ್ಬರ...
(world population day ಸಂದರ್ಭದಲ್ಲಿ ಬರೆದ ಪ್ರಹಸನ) ಜುಲೈ11ಕ್ಕ ವರ್ಲ್ಡ ಪಾಪ್ಯುಲೇಶನ್ ಡೇ ಅಂತ, ನಿನ್ನೆ ನಮ್ಮ ಒಣ್ಯಾಗಿನ ಮಂದಿ ಬಂದ “ಸರ್. ನೀವು ಪಾಪ್ಯುಲೇಶನ್ ಡೇ ಕಾರ್ಯಕ್ರಮದ ದಿವಸ ಬಂದ ಒಂದ ಕ್ರಿಯೇಟಿವ್ ಭಾಷಣಾ ಮಾಡಬೇಕು” ಅಂತ ಹೇಳಿದರು. ಅಲ್ಲಾ...
(ಅಂತರರಾಷ್ಟ್ರೀಯ ಮಹಿಳಾ ದಿವಸದ ಅಂಗವಾಗಿ ಬರದದ್ದು) ನಿನ್ನೆ ಸಂಜಿಗೆ ನಾ ಮನಿಗೆ ಬರೋದ ತಡಾ ನನ್ನ ಹೆಂಡತಿ ತಯಾರ ಆಗಿ ನಿಂತಿದ್ದಳು , “ಯಾಕವಾ, ಎಲ್ಲೊ ಹೊಂಟಿಯಲ್ಲಾ ? ” ಅಂತ ಕೇಳಿದೆ, “ನಮ್ಮ ಮಹಿಳಾ ಮಂಡಳದವರ ಜೋತಿಗೆ ಹೊರಗ ಹೊಂಟೇನಿ...
(friendship day ಮತ್ತು international beer day ಎರೆಡೂ ಒಂದ ದಿವಸ ಬಂದಾಗ ಬರೆದದ್ದು) ನಿನ್ನೆ ರಾತ್ರಿ ಹನ್ನೇರಡುವರಿ ಒಂದ ಆಗಿತ್ತ ನಂಗ ಮೊಬೈಲನಾಗ ಫೋನ್ ಬಂತ. ನಾ ಜಸ್ಟ ವೀಕೆಂಡ ಪಾರ್ಟೀ ಮುಗಿಸಿಕೊಂಡ ಬಂದ ಮಲ್ಕೋಂಡಿದ್ದೆ, ಅದರಾಗ ನನ್ನ ಹೆಂಡತಿಗೆ...
ನನಗ ಯಾಕೋ ಇತ್ತೀಚಿಗೆ ಈ ನೈಟಿ ಕಂಡ ಹಿಡದವಂಗ ನೊಬೆಲ್ ಬಹುಮಾನ ಯಾಕ ಕೊಡಬಾರದು ಅಂತ ಅನಸಲಿಕತ್ತದ. ನಾ ಹೇಳಿದ್ದ ಹೆಣ್ಣ ಮಕ್ಕಳದ ನೈಟಿ ಮತ್ತ, ಗಂಡಸರದ ನೈಂಟಿ ಅಲ್ಲಾ. ಹಂಗ ನೈಂಟಿ (ಅಲ್ಕೋಹಾಲ) ಕಂಡ ಹಿಡದಂವಾ ವಿಜ್ಞಾನಿ, ಅವಂಗ ನೋಬೆಲ್...
(ಸೆಪ್ಟೇಂಬರ್ 10, world suicide prevention day ನಿಮಿತ್ತ ಬರದ ಲೇಖನ) ಇದೇನ ‘ಇಬ್ಬರ ಗಂಡಂದರಾದ ಮ್ಯಾಲೆ ಒಬ್ಬಕಿ ಹೆಂಡತಿ’? ಗಂಡಂದರ ಯಾಕ ಮೊದ್ಲ , ಹೆಂಡ್ತಿ ಯಾಕ ಅಲ್ಲಾ? ಇದು ಹೆಣ್ಣಮಕ್ಕಳಿಗೆ ಅನ್ಯಾಯ ಅಂತ ಅನಬ್ಯಾಡರಿ. ನಾ ಹೇಳಿದ್ದು ನಮ್ಮ...
ಸುಮಾರ ಮೂರ ವರ್ಷದ ಹಿಂದಿನ ಮಾತು, ಶ್ರಾವಣ ಮಾಸದಾಗ ಒಂದ ಸಂಡೆ ನಮ್ಮ ಚಂದಕ್ಕ ಮೌಶಿ ಮನ್ಯಾಗ ಪವಮಾನ ಹೋಮ ಮತ್ತ ಸತ್ಯನಾರಾಯಣ ಪೂಜಾ ಇಟ್ಕೊಂಡಿದ್ದರು. ಇದ ಬ್ರಾಹ್ಮಣರಾಗ ಕಾಮನ್, ಅವರಿಗೆ ಶ್ರಾವಣ-ಭಾದ್ರಪದ ಮಾಸ ಬಂದಾಗ ಗೊತ್ತಾಗೋದು ಅವರ ಬ್ರಾಹ್ಮಣರಂತ, ವರ್ಷದಾಗ...
“ಪ್ರಶಾಂತಾ ನಾಳೇ ನೀ ರಜಾ ತಗೋ, ಎಲ್ಲಿನೂ ತಿರಗಲಿಕ್ಕ ಹೋಗಬ್ಯಾಡಾ, ಎರಡ ದಿವಸ ಆತು ನಳಾ ಬಂದಿಲ್ಲಾ. ನಾಳೆ ಗ್ಯಾರಂಟೀ ಬರತದ, ನೀನ ಮಡಿನೀರ ತುಂಬಬೇಕ ಈ ಸರತೆ” ಅಂತ ಸೋಮವಾರ ರಾತ್ರಿ ಊಟಕ್ಕ ಕೂತಾಗ ನಮ್ಮವ್ವಾ ಒಂದು ದೂಡ್ದ ಬಾಂಬ್...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...