’ಗಿರಮಿಟ್’ ನನ್ನ ಪ್ರಸ್ತುತ ವಿಜಯವಾಣಿಯ ಅಂಕಣ… ನನಗೆ ಅಂಕಣ ಬರಿಲಿಕ್ಕೆ ಅವಕಾಶ ಕೊಟ್ಟ ವಿಜಯ ವಾಣಿಯವರಿಗೆ ಅನಂತ ಧನ್ಯವಾದಗಳು.
ಈಗ ಒಂದ ತಿಂಗಳ ಹಿಂದ ನಮ್ಮ ದೋಸ್ತ ಸೀನ್ಯಾನ ತಮ್ಮನ ಮದ್ವಿ ಫಿಕ್ಸ್ ಆಗಿತ್ತ, ನನಗ ಅಂವಾ ಒಂದ ಒಂದ ಹದಿನೈದ ದಿವಸ ಮೊದ್ಲನ’ಲೇ….ನೀ ತಪ್ಪಸಬ್ಯಾಡಾ…ಹಂಗ ಭಾಳ ಮಂದಿ ದೋಸ್ತರಿಗೆ ಹೇಳಲಿಕತ್ತಿಲ್ಲಾ, ಯಾಕಂದರ ಇದ ಡೆಸ್ಟಿನೇಶನ್ ವೆಡ್ಡಿಂಗ್…ಮದ್ವಿ ಗೋವಾ ರಿಸಾರ್ಟ ಒಳಗ...
ಇದ ಒಂದ ತಿಂಗಳ ಹಿಂದಿನ ಮಾತ ಇರಬೇಕ. ಮುಂಜಾನೆ ಎದ್ದ ಯಾರ ಮಾರಿ ನೋಡಿದ್ನೋ ಏನೋ?…ಅಲ್ಲಾ ಹಂಗ ಮನ್ಯಾಗ ಮಲ್ಕೊಂಡಿದ್ದೆ ಅಂದ ಮ್ಯಾಲೆ ಹೆಂಡ್ತಿ ಮಾರಿ ನೋಡಿ ಎದ್ದಿರತೇನಿ ಆ ಮಾತ ಬ್ಯಾರೆ, ಒಟ್ಟ ಅವತ್ತ ಎದ್ದದ್ದ ಮುಹೂರ್ತ ಛಲೋ ಇರಲಿಲ್ಲಾ...
ಇದ ಒಂದ ತಿಂಗಳ ಹಿಂದಿನ ಮಾತ ನನ್ನ ಹೆಂಡ್ತಿ ಮೌಶಿ ಮಗಂದ ಮದ್ವಿ ಇತ್ತ. ಇನ್ನ ಅವರು ಇದ್ದೂರೂರ, ಮ್ಯಾಲೆ ನನ್ನ ಹೆಂಡ್ತಿ ಮೌಶಿ ಅಂದರ ನಮ್ಮಕಿ ಅವರಿಗೆ ಮಗಳ ಆಗಬೇಕ, ಹಿಂಗಾಗಿ ಮದ್ವಿ ಗೊತ್ತಾಗೊ ಪುರಸತ್ತ ಇಲ್ಲದ’ನಿನ್ನ ತಮ್ಮನ ಮದ್ವಿವಾ,...
ಈಗ ಒಂದ ಮೂರ ವರ್ಷದ ಹಿಂದ ಲಾಕ್ ಡೌನ್ ಆದಾಗ ದಿವಸಾ ಮುಂಜಾನೆ-ಸಂಜಿಗೆ ವಾಕಿಂಗ್ ಹೋಗ್ತಿದ್ದೆ. ಹಂಗ ಮನಿ ಇಂದ ಹೊರಗ ಬರಬಾರದ ಅಂತ ಲಾಕ್ ಡೌನ್ ಮಾಡಿದ್ದರ ಖರೆ ಆದರ ಏಷ್ಟಂತ ಮನ್ಯಾಗ ’ಅದ ಹೆಂಡ್ತಿ ಅದ ಮಕ್ಕಳ’ ಜೊತಿ...
ನಿನ್ನೆ ಮುಂಜ-ಮುಂಜಾನೆ ನಮ್ಮ ಹಳೇ ಓಣಿ ವಾಟ್ಸಪ್ ಗ್ರೂಪ್ ಒಳಗ ಒಂದ ನಲವತ್ತ-ಐವತ್ತ ಮೆಸೆಜ್ ಬಂದಿದ್ವು. ನಾ ಏನ ಅಂತ ನೋಡಿದರ ಗ್ರೂಪ್ ತುಂಬ ’ಓಂ ಶಾಂತಿ’,’RIP’ ಅಂತ ಇದ್ದವು. ನಾ ಗಾಬರಿ ಆಗಿ ಯಾರ ಹೋದರ ಅಂತ ನೋಡಿದರ ಒಂದ...
’ನಿಂಗ ಎಷ್ಟ ಮಾಡಿದರು ಅಷ್ಟ’’ನಾ ಏನ ಮಾಡಿದರು ನಿಮಗ ಸಮಾಧಾನ ಇಲ್ಲ ತೊಗೊರಿ’’ಬರೇ ನಾ ಮಾಡಿದ್ದರಾಗ ತಪ್ಪ ಹುಡುಕರಿ’’ನಾ ಹೆಂತಾ ಅಡಗಿ ಮಾಡಿದರು ಹೆಸರ ಇಡೋದ ಬಿಡಬ್ಯಾಡ್ರಿ’’ನಾ ಮಾಡಿದ್ದ ಒಂದ ಕೆಲಸಕ್ಕರ ಹೌದ ಅಂತಿ ಏನ’….ಹಿಂತಾವೇಲ್ಲಾ ಮಾತು ಏನಿಲ್ಲಾಂದರೂ ದಿನಕ್ಕ ಒಂದ...
ನಿನ್ನೆ ಮಧ್ಯಾಹ್ನ ಆಫೀಸನಿಂದ ಊಟಕ್ಕ ಬಂದಾಗ ಪ್ರೇರಣಾ ಕಾಣಲಿಲ್ಲಾ. ನಮ್ಮವ್ವನ ನಾ ಬಂದದ್ದ ನೋಡಿ ತಾಟ ಹಾಕಿದ್ಲು. ನಾ ಹೊಟ್ಟಿ ಹಸ್ತಾಗ ಮನ್ಯಾಗ ಯಾರಿಲ್ಲಾ, ಯಾಕಿಲ್ಲಾ ಎಲ್ಲಾ ತಲಿ ಕೆಡಸಿಗೊಳ್ಳಿಕ್ಕೆ ಹೋಗಂಗಿಲ್ಲಾ. ಊಟ ಆದಮ್ಯಾಲೆ’ಎಲ್ಲೇ ಹೋಗ್ಯಾಳ ನಿನ್ನ ಸೊಸಿ, ಕಾಣವಳ್ಳಲಾ’ ಅಂತ...
ಈಗ ಒಂದ ಎಂಟ ತಿಂಗಳ ಹಿಂದಿನ ಮಾತ ಇರಬೇಕ, ನಾ ಒಂದ ಲಗ್ನಕ್ಕ ಹೋಗಿದ್ದೆ, ಅಲ್ಲೆ ಕಲ್ಯಾಣ ಮಂಟಪದ ಗ್ವಾಡಿ ಮ್ಯಾಲೆ ಒಂದ ಬೋರ್ಡ ಹಾಕಿ ಅದರ ಮ್ಯಾಲೆ ‘ಜೀವನ ರಥ… ಸಾಗುವ ಪಥ’ ಅಂತ ಒಂದಿಷ್ಟ ಹಿತ ವಚನ ಬರದಿದ್ದರು....
ಈಗ ಒಂದ ಎರಡ ಮೂರ ವರ್ಷದಿಂದ ದಿವಸಾ ಮುಂಜಾನೆ ಗಂಡಾ ಹೆಂಡತಿ ಇಬ್ಬರು ನಮ್ಮ ಪೇಪರ್ ಹಿಡ್ಕೊಂಡ ಆ ಪದಾವಳಿ ತುಂಬೊ ಚಟಾ ಹಚ್ಗೊಂಡೇವಿ. ಹಂಗ ಇಬ್ಬರದೂ ಕನ್ನಡ ಅಷ್ಟಕ್ಕಷ್ಟ, ನಾ ಏನೋ ಒಂದ ನಾಲ್ಕ ಅಕ್ಷರ ಆಡ ಭಾಷೆ ಒಳಗ...
ನಾ ಖರೇ ಹೇಳ್ತೇನಿ ಇತ್ತೀಚಿಗೆ ವಾರಕ್ಕ ಏನಿಲ್ಲಾಂದರೂ ಒಂದ ಐದ ಆರ ಸರತೆ ನನ್ನ ಹೆಂಡ್ತಿ ಕಡೆ ’ಮುದಕರಾದ್ರು ಮ್ಯಾಚುರಿಟಿ ಬರಲಿಲ್ಲಾ…ಬುದ್ಧಿ ಎಲ್ಲೆ ಇಟ್ಟೀರಿ’ ಅಂತ ಬೈಸ್ಗೋತಿರ್ತೇನಿ. ಹಂಗ ವಾರಕ್ಕ ಒಂದ ಎರಡ ಸರತೆ ನಮ್ಮವ್ವನೂ ಅಂತಿರ್ತಾಳ ಆ ಮಾತ ಬ್ಯಾರೆ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...