ಒಂದ ೧೦-೧೫ ದಿವಸ ಆತು ಮಳಿ ಹಿಡದ ಬಿಟ್ಟದ ,ಎಲ್ಲಿನೂ ಹೊರಗ ಹೊಗೋಹಂಗಿಲ್ಲ, ಯಾವಾಗ ಮಳಿ ಬರತದ ಯಾವಗ ಇಲ್ಲಾ ಅಂತ ಗೊತ್ತ ಆಗಂಗಿಲ್ಲ, ಮೊನ್ನೆ ೨-೩ ಸಲ ಮಳ್ಯಾಗ ತೋಯ್ಸಕೊಂಡ ನೆಗಡಿ ಬ್ಯಾರೇ ಆಗಿತ್ತು. ಒಂದ ಸ್ವಲ್ಪ ಮೈಯಾಗ ಬ್ಯಾರೆ...
ಇದ ಅಗದಿ ಎಲ್ಲಾರ ಮನ್ಯಾಗಿನ ಹೆಣ್ಣ ಮಕ್ಕಳದ ಟಿಪಿಕಲ್ ಡೈಲಾಗ, ಯಾರರ ಹೆಣ್ಣಮಕ್ಕಳ ಮನಿಗೆ ಬಂದರ ಅವರಿಗೆ ಹೋಗಬೇಕಾರ ’ಕುಂಕಮ ತೊಗೊಂಡ ಹೋಗ ಬರ್ರಿ’ಅಂತ ಅರಿಷಣ ಕುಂಕಮ ಕೊಟ್ಟ ಕಳಸೋದ ಪದ್ದತಿ ಮತ್ತ ಅದ ನಮ್ಮ ಸಂಸ್ಕೃತಿ. ಹಂಗ ಯಾರರ ಭಾಳ...
ಅವತ್ತ ಮುಂಜ ಮುಂಜಾನೆ ಗಡಿಬಿಡಿಲೆ ಸ್ನಾನ ಮಾಡಿ ರೆಡಿ ಆಗೋ ಹೊತ್ತಿನಾಗ ನಮ್ಮ ಮೌಶಿ ಮಗಾ ವಿನಾಯಕ ಧಾರವಾಡದಿಂದ ಫೋನ ಮಾಡಿದಾ. ಹಂಗ ನಾ ಬ್ಯಾರೆ ಯಾರದರ ಫೋನ ಇದ್ದರ ಮುಂಜಾನಿ ಹೊತ್ತನಾಗ ಎತ್ತೊವನ ಅಲ್ಲಾ ಆದರ ಈ ಮನಷ್ಯಾ ನಾವ...
ಮುಂಜಾನೆ ಏಳೋದ ತಡಾ ನಮ್ಮವ್ವಂದ ರಗಳಿ ಶುರುನ. ಅಕಿಗೆ ವಟ್ಟ ಯಾವಾಗಲು ವಟಾ-ವಟಾ ಅಂತ ಎಲ್ಲಾರಿಗೂ ಬೈಕೋತ ಇದ್ದರ ಸಮಾಧಾನ. ಅದರಾಗ ಅಕಿ ಕೈಯಾಗ ನನ್ನ ಮಗಾ ಬ್ಯಾರೆ ಸಿಕ್ಕ ಬಿಟ್ಟಾನ, ಅವಂದು ಅಡ್ನಾಡಿ ವಯಸ್ಸು ಯಾರ ಹೇಳಿದ್ದ ಕೇಳೊ ವಯಸ್ಸಲ್ಲಾ,...
ಮೊನ್ನೆ ಸಂಪತ್ತ ಶುಕ್ರವಾರ ಬೆಳಿಗ್ಗೆ ನಾ ಏಳೋ ಪುರಸತ್ತ ಇಲ್ಲದ ದೇವರ ಮನ್ಯಾಗ ನಮ್ಮವ್ವಂದ ‘ಭಾಗ್ಯದ ಲಕ್ಷ್ವೀ ಬಾರಮ್ಮಾ, ಶುಕ್ರವಾರದ ಪೂಜೆಯ ವೇಳೆಗೆ’ ಶುರು ಆಗಿತ್ತ. ಇತ್ತಲಾಗ ನನ್ನ ಹೆಂಡತಿದ ಇನ್ನೂ ಏಳೋ ವೇಳೆ ಆಗಿದ್ದಿಲ್ಲಾ. ಅಲ್ಲಾ ಅಕಿಗೆ ಮೊದ್ಲಿಂದ ದೇವರು...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...