’ಗಿರಮಿಟ್’ ನನ್ನ ಪ್ರಸ್ತುತ ವಿಜಯವಾಣಿಯ ಅಂಕಣ… ನನಗೆ ಅಂಕಣ ಬರಿಲಿಕ್ಕೆ ಅವಕಾಶ ಕೊಟ್ಟ ವಿಜಯ ವಾಣಿಯವರಿಗೆ ಅನಂತ ಧನ್ಯವಾದಗಳು.
ಅಲ್ಲಾ, ನಾ ಕೇಳಲಿಕತ್ತಿದ್ದ ಹೆಂಡ್ತಿ ಬೆಕ್ಕಿಗೆ ಅಡ್ಡ ಹೋದರ ಬೆಕ್ಕಿಗೆ ಛಲೋನೋ ಕೆಟ್ಟೋ ಅಂತ ಮತ್ತ, ಹೆಂಡ್ತಿಗೆ ಅಲ್ಲಾ. ಹಂಗ ಹೆಂಡ್ತಿಗೆ ಗಂಡನ್ನ ಒಬ್ಬೊವನ ಬಿಟ್ಟ ಯಾರ ಅಡ್ಡ ಹೋದರು ಛಲೋನ ಆ ಮಾತ ಬ್ಯಾರೆ. ಜನಾ ಬೆಕ್ಕ ಅಡ್ಡ ಹೋದರ...
ಇದ ಒಂದ ತಿಂಗಳ ಹಿಂದಿನ ಮಾತ ಇರಬೇಕ, ನನ್ನ ಹೆಂಡ್ತಿ ಕಸಾ ಹೊಡಿಲಿಕ್ಕತ್ತೋಕಿ ಒಮ್ಮಿಂದೊಮ್ಮಿಲೇ “ರ್ರಿ…ಈ ಪಾಲಿಸಿ ಲೆಟರ್ ಕಸ್ದಾಗ ಬಿದ್ದಿತ್ತ…ಬ್ಯಾಡೇನ್?” ಅಂತ ಕೇಳಿದ್ಲು. ನಾ ಅದೇನ ಅಂತ ನೋಡಿ “ಏ, ಬ್ಯಾಡ ತೊಗೊ ಒಗಿ” ಅಂತ ಸುಮ್ಮನಾದೆ. ಅಕಿ ಅಷ್ಟಕ್ಕ...
ನಿನ್ನೆ ನಮ್ಮ ದೀಪ್ಯಾ ಭೆಟ್ಟಿ ಆಗಿದ್ದಾ, “ಮತ್ತೇನಲೇ…ಎಲ್ಲೇ ಕಾಣವಲ್ಲಿ, ನಮ್ಮ ಏರಿಯಾ ಬಿಟ್ಟ ಹೋದಮ್ಯಾಲೆ ನಮನ್ನೇಲ್ಲಾ ಮರತ ಬಿಟ್ಟಿ” ಅಂತ ನಾ ಅಂದರ “ಏ….ನಿಮ್ಮ ಏರಿಯಾದ್ದ ಹೆಸರ ಕೇಳಿದರ ನನ್ನ ಹೆಂಡ್ತಿ ಮೂಗ ಮುಚಗೋತಾಳ ಮಾರಾಯ, ಹಿಂಗಾಗಿ ನಾವ ಅತ್ತಲಾಗ ಹಾಯಂಗೇಲಾ”...
ಇದ ಒಂದ ಹದಿನೈದ ವರ್ಷದ ಹಿಂದಿನ ಮಾತ, ನಮ್ಮ ದೋಸ್ತ ಶಿವನಗೌಡ ಪಾಟೀಲ ಅನ್ನೋವಂದ ಲಗ್ನ ಇತ್ತ. ಹಂಗ ಅವಂಗ ಒಬ್ಬೊಂವ ತಮ್ಮ ಬ್ಯಾರೆ ಇದ್ದಾ, ಅದರಾಗ ಇವರ ಗೌಡಕಿ ಮನೆತನದವರು ಹಿಂಗಾಗಿ ಅಣ್ಣಾ-ತಮ್ಮ ಇಬ್ಬರದೂ ಒಮ್ಮೆ ಲಗ್ನಾ ಹೂಡಿದರು. ಅಣ್ಣಗ...
ಒಂದ ನಾಲ್ಕೈದ ವರ್ಷ ಆತ ನನ್ನ ಹೆಂಡ್ತಿ ’ರ್ರೀ..ನಂದು ಒಂದ ಫೇಸಬುಕ್ ಅಕೌಂಟ ಓಪನ್ ಮಾಡಿ ಕೊಡ್ರಿ’ ಅಂತ ಗಂಟ ಬಿದ್ದಾಳ. ಅಲ್ಲಾ ಹಂಗ ಅಕಿ ವರ್ಷದಾಗ ಹತ್ತ ಸರತೆ ಅಂತಾಳ ಖರೆ ಆದರ ನಾ ’ಏ, ನಿಂಗೊತ್ತಿಲ್ಲಾ ಸುಮ್ಮನೀರ…ಅದ ಕೆಟ್ಟ...
ನಾ ಹೇಳ್ತೇನಿ ಇದ ನನ್ನ ವಯಸ್ಸಿನ ಗಂಡ ಹುಡುಗರಿಗೆ ಅದರಾಗೂ ಗಂಡಂದರಿಗೆ ಇರೋ ಯುನಿವರ್ಸಲ ಪ್ರಾಬ್ಲೇಮ್. ಈಗ ನಾವು ಒಂದ ಹದಿನೈದ-ಇಪ್ಪತ್ತ ವರ್ಷದಿಂದ ಸಂಸಾರ ನಡಸಿಗೊತ ಹೊಂಟಿರ್ತೇವಿ, ಇತ್ತಲಾಗ ನಮಗ ಒಂದ- ಎರಡ ಮಕ್ಕಳಾಗಿ ಅವು ನಮ್ಮ ಭುಜದ ಲೇವಲಗೆ ಬೆಳದಿರ್ತಾವ,...
ಈಗ ಒಂದ ಎರಡ ತಿಂಗಳ ಹಿಂದ ಪೇಪರನಾಗ ಒಂದ ಸುದ್ದಿ ಬಂದಿತ್ತ, ಸುದ್ದಿ ಏನಪಾ ಅಂದರ ಆಂಧ್ರ ಪ್ರದೇಶದ ಒಂದ ಹಳ್ಯಾಗ ಹೆಣ್ಣ ಮಕ್ಕಳ ಹಗಲ ಹೊತ್ತಿನಾಗ ’ನೈಟಿ’ ಹಾಕೊಳಂಗಿಲ್ಲಾಂತ ಗ್ರಾಮ ಪಂಚಾಯತಿಯವರು ಕಾನೂನ ಮಾಡ್ಯಾರ ಅಂತ. 6 am to...
ಈಗ ಒಂದ ವಾರದಿಂದ ನನ್ನ ಹೆಂಡ್ತಿ ’ರ್ರಿ…ಈ ವರ್ಷ ನ್ಯೂ ಇಯರಗೆ ನಾ ರೆಜುಲೇಶನ್ಸ ಏನ್ಮಾಡ್ಲೀ?” ಅಂತ ಗಂಟ ಬಿದ್ದಾಳ. ಅಕಿ ಮಾತ ಕೇಳಿದರ ಯಾರರ ಅಕಿ ಏನ ಜೀವನದಾಗ ಎಲ್ಲಾ ಗಂಡನ ಮಾತ ಕೇಳೆ ಮಾಡ್ತಾಳಂತ ತಿಳ್ಕೊಂಡಿರಬೇಕ ಇಲ್ಲಾ ಎಷ್ಟ...
ಇವತ್ತಿಗೆ ಕರೆಕ್ಟ ಎರಡ ತಿಂಗಳ ಹಿಂದ ನಮ್ಮಪ್ಪಾ 79ನೇ ವಯಸ್ಸಿನಾಗ ತೀರಕೊಂಡಾ. ಹಂಗ ನಾ ನಮ್ಮಪ್ಪ ಸತ್ತಾಗ ನಿಧನವಾರ್ತೆ ಒಳಗ ಹಾಕಸಿದ್ದೆ ಖರೆ ಆದರ ಅಡ್ವರ್ಟೈಸಮೆಂಟೇನ ಕೊಟ್ಟಿದ್ದಿಲ್ಲಾ. ಹಿಂಗಾಗಿ ಯಾರ ನಿಧನ ವಾರ್ತೆ ಓದಂಗಿಲ್ಲಾ ಬರೇ ಅಡ್ವರ್ಟೈಸಮೆಂಟ್ ಇಷ್ಟ ಓದತಾರ ಅವರಿಗೆ...
ಇದ ಒಂದ ಐದ ವರ್ಷದ ಹಿಂದಿನ ಮಾತ ಇರಬೇಕ ಒಂದ ದಿವಸ ಸಂಜಿಮುಂದ ನಮ್ಮ ದೋಸ್ತ ಅರಣ್ಯಾಂದ ಫೋನ ಬಂತ. ಅವರಜ್ಜಿ ಒಬ್ಬೋಕಿ ಸಿರಿಯಸ್ ಇದ್ಲು ಹಿಂಗಾಗಿ ನಾ ಸ್ವಲ್ಪ ಹೆದರಕೋತ ಮನಸ್ಸಿನಾಗ RIP..RIP ಅನ್ಕೋತನ ಫೋನ ಎತ್ತಿದೆ. ನಾ ಅನ್ಕೊಂಡಿದ್ದ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...