’ಗಿರಮಿಟ್’ ನನ್ನ ಪ್ರಸ್ತುತ ವಿಜಯವಾಣಿಯ ಅಂಕಣ… ನನಗೆ ಅಂಕಣ ಬರಿಲಿಕ್ಕೆ ಅವಕಾಶ ಕೊಟ್ಟ ವಿಜಯ ವಾಣಿಯವರಿಗೆ ಅನಂತ ಧನ್ಯವಾದಗಳು.
ಈಗ ಒಂದ ತಿಂಗಳ ಹಿಂದ ನಮ್ಮ ಪಿ.ಜಿ. ಫೋನ ಮಾಡಿದ್ದಾ, ಇಂವಾ ಈಗ ಅಮೇರಿಕಾದಾಗ ಇರ್ತಾನ. ಒಂದ ಕಾಲದಾಗ ಕೊತಂಬರಿ ಕಾಲೇಜನಾಗ ನನ್ನ ಪಿ.ಯು.ಸಿ ಕ್ಲಾಸಮೇಟ್ ಇದ್ದಾ. ಭಾರಿ ಶಾಣ್ಯಾ ನನ್ನ ಮಗಾ. ಹಂಗ ಅಕ್ಕಿ ಆಲೂರನಂವಾ ಖರೆ ಆದರ ದೊಡ್ಡ...
ಮೊನ್ನೆ ಜುಲೈ೧೧ಕ್ಕ ವರ್ಲ್ಡ ಪಾಪ್ಯೂಲೇಶನ್ ಡೇ ಇತ್ತ, ಅಂದರ ವಿಶ್ವ ಜನಸಂಖ್ಯಾ ದಿವಸ. ಅಲ್ಲಾ ಹಂಗ ಅವತ್ತ ಯಾರ ಜಾಸ್ತಿ ಹಡದಿರ್ತಾರ ಅವರಿಗೇನ ಹಿಡದ ದಂಡಾ ಹಾಕಂಗಿಲ್ಲಾ, ಕಡಮಿ ಹಡದವರಿಗೇನ ಕರದ ಪ್ರೈಜ ಕೊಡಂಗಿಲ್ಲ ಮತ್ತ. ಜಗತ್ತಿನಾಗ ಜನರಿಗೆ ಜನಸಂಖ್ಯೆ ಅರಿವು...
ಒಂದ ತಿಂಗಳ ಹಿಂದ ನಮ್ಮ ಕಾಶಕ್ಕ ಮೌಶಿ ಗಂಡನ ಕಟಗೊಂಡ ಕಾಶಿಗೆ ಹೋಗಿ ಬಂದ್ಲು. ಪಾಪ ಹಂಗ ಅಕಿ ಕಾಶಿಗೆ ಹೋಗಬೇಕ ಅನ್ನಲಿಕತ್ತ ಹತ್ತ ವರ್ಷ ಆಗಿತ್ತ ಖರೆ ಆದರ ಮಗಾ ವಿನ್ಯಾಗ ಅವರವ್ವಾ ಅಪ್ಪನ ಕಾಶಿ ಕಳಸಲಿಕ್ಕೆ ದುಡ್ಡಿದ್ದರು ಟೈಮ...
ಒಂದ ಎರಡ ತಿಂಗಳದ ಹಿಂದ ಫ್ರೀ ಎಂಟ್ರಿ ಅದ ಅಂತ ಒಂದ ಸಂಗೀತ ಕಾರ್ಯಕ್ರಮಕ್ಕ ಹೆಂಡ್ತಿನ್ನೂ ಕರಕೊಂಡ ಹೋಗಿದ್ದೆ. ಇನ್ನೇನ ಕಾರ್ಯಕ್ರಮ ಶುರು ಆಗಬೇಕು, ನಿರೂಪಕಿ ಬಂದ ಸ್ವಾಗತ ಮಾಡೋದಕ್ಕ ನನ್ನ ಹೆಂಡ್ತಿ ಸಟಕ್ಕನ್ “ರ್ರಿ…ನಾ ಇವರ ಧ್ವನಿ ಎಲ್ಲೋ ಕೇಳೇನ್ರಿ”...
ಇವತ್ತ ಮುಂಜಾನೆ ಒಮ್ಮಿಂದೊಮ್ಮಿಲೇ ನನ್ನ ಹೆಂಡ್ತಿ ’ರ್ರಿ….ಇವತ್ತಿಂದ ಏನ ನಿಂಬದ ಬ್ಲೂ ಕಾಲಮ್ ಏನ್ರಿ?’ ಅಂತ ಕೇಳಿದ್ಲು. ನಾ ಒಮ್ಮಿಕ್ಕಲೇ ಗಾಬರಿ ಆದೆ. ಅಲ್ಲಾ ನಾ ಬರೇಯೋದ ತಿಂಗಳಿಗೆ ಎರಡ ಸಲಾ ಗಿರಮಿಟ್ ಕಾಲಮ್. ಇನ್ನ ನಾ ಯಾವಾಗಿಂದ ಬ್ಲೂ ಕಾಲಮ್...
ಮೊನ್ನೆ ಆಫೀಸನಾಗ ಅಡಿಟ್ ಇತ್ತು, ಅಡಿಟರ್ ಕರೆಕ್ಟ ಆಫೀಸ ಶುರು ಆಗೋದಕ್ಕ ಬಂದರು. ಆದರ ನಮ್ಮ ಅಕೌಂಟೆಂಟದ ಇನ್ನೂ ಪತ್ತೆ ಇರಲಿಲ್ಲಾ. ನಾವ ದಾರಿ ಕಾಯ್ಕೋತ ಕೂತ್ವಿ, ಮುಂದ ಒಂದ ತಾಸ ಬಿಟ್ಟ ನಮ್ಮ ಅಕೌಂಟಂಟ್ ಬಂದ್ಲು. ಅಕಿ ಬರೋ ಪುರಸತ್ತ...
ಅಲ್ಲಾ, ನಾ ಕೇಳಲಿಕತ್ತಿದ್ದ ಹೆಂಡ್ತಿ ಬೆಕ್ಕಿಗೆ ಅಡ್ಡ ಹೋದರ ಬೆಕ್ಕಿಗೆ ಛಲೋನೋ ಕೆಟ್ಟೋ ಅಂತ ಮತ್ತ, ಹೆಂಡ್ತಿಗೆ ಅಲ್ಲಾ. ಹಂಗ ಹೆಂಡ್ತಿಗೆ ಗಂಡನ್ನ ಒಬ್ಬೊವನ ಬಿಟ್ಟ ಯಾರ ಅಡ್ಡ ಹೋದರು ಛಲೋನ ಆ ಮಾತ ಬ್ಯಾರೆ. ಜನಾ ಬೆಕ್ಕ ಅಡ್ಡ ಹೋದರ...
ಇದ ಒಂದ ತಿಂಗಳ ಹಿಂದಿನ ಮಾತ ಇರಬೇಕ, ನನ್ನ ಹೆಂಡ್ತಿ ಕಸಾ ಹೊಡಿಲಿಕ್ಕತ್ತೋಕಿ ಒಮ್ಮಿಂದೊಮ್ಮಿಲೇ “ರ್ರಿ…ಈ ಪಾಲಿಸಿ ಲೆಟರ್ ಕಸ್ದಾಗ ಬಿದ್ದಿತ್ತ…ಬ್ಯಾಡೇನ್?” ಅಂತ ಕೇಳಿದ್ಲು. ನಾ ಅದೇನ ಅಂತ ನೋಡಿ “ಏ, ಬ್ಯಾಡ ತೊಗೊ ಒಗಿ” ಅಂತ ಸುಮ್ಮನಾದೆ. ಅಕಿ ಅಷ್ಟಕ್ಕ...
ನಿನ್ನೆ ನಮ್ಮ ದೀಪ್ಯಾ ಭೆಟ್ಟಿ ಆಗಿದ್ದಾ, “ಮತ್ತೇನಲೇ…ಎಲ್ಲೇ ಕಾಣವಲ್ಲಿ, ನಮ್ಮ ಏರಿಯಾ ಬಿಟ್ಟ ಹೋದಮ್ಯಾಲೆ ನಮನ್ನೇಲ್ಲಾ ಮರತ ಬಿಟ್ಟಿ” ಅಂತ ನಾ ಅಂದರ “ಏ….ನಿಮ್ಮ ಏರಿಯಾದ್ದ ಹೆಸರ ಕೇಳಿದರ ನನ್ನ ಹೆಂಡ್ತಿ ಮೂಗ ಮುಚಗೋತಾಳ ಮಾರಾಯ, ಹಿಂಗಾಗಿ ನಾವ ಅತ್ತಲಾಗ ಹಾಯಂಗೇಲಾ”...
ಇದ ಒಂದ ಹದಿನೈದ ವರ್ಷದ ಹಿಂದಿನ ಮಾತ, ನಮ್ಮ ದೋಸ್ತ ಶಿವನಗೌಡ ಪಾಟೀಲ ಅನ್ನೋವಂದ ಲಗ್ನ ಇತ್ತ. ಹಂಗ ಅವಂಗ ಒಬ್ಬೊಂವ ತಮ್ಮ ಬ್ಯಾರೆ ಇದ್ದಾ, ಅದರಾಗ ಇವರ ಗೌಡಕಿ ಮನೆತನದವರು ಹಿಂಗಾಗಿ ಅಣ್ಣಾ-ತಮ್ಮ ಇಬ್ಬರದೂ ಒಮ್ಮೆ ಲಗ್ನಾ ಹೂಡಿದರು. ಅಣ್ಣಗ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...