’ಗಿರಮಿಟ್’ ನನ್ನ ಪ್ರಸ್ತುತ ವಿಜಯವಾಣಿಯ ಅಂಕಣ… ನನಗೆ ಅಂಕಣ ಬರಿಲಿಕ್ಕೆ ಅವಕಾಶ ಕೊಟ್ಟ ವಿಜಯ ವಾಣಿಯವರಿಗೆ ಅನಂತ ಧನ್ಯವಾದಗಳು.
ಇದ ಇವತ್ತ ಮುಂಜಾನಿ ಮಾತ, ನನಗ ಗಡದ್ದ ನಿದ್ದಿ ಹತ್ತಿತ್ತ ಒಮ್ಮಿಂದೊಮ್ಮಿಲೆ ಯಾರೋ ಕಿವ್ಯಾಗ ’ಗ್ರಹಣ ಬಿಡ್ತ ಗ್ರಹಣ’ ಅಂತ ಒದರಿದಂಗ ಆತ. ನಂಗ ಅದ ಕನಸೋ ಇಲ್ಲಾ ನನಸೊ ಅನ್ನೋದ ಗೊತ್ತಾಗಲಿಲ್ಲಾ, ಅದರಾಗ ರಾತ್ರಿ ಬ್ಯಾರೆ ಯರಕೊಂಡ ಮಲ್ಕೊಂಡಿದ್ದೆ…ಅಲ್ಲಾ, ಅದೇನಾಗಿತ್ತಂದರ...
ಇದ ಏನಿಲ್ಲಾ ಅಂದ್ರು ಒಂದ ಐದ ವರ್ಷದ ಹಿಂದಿನ ಮಾತ ಇರಬೇಕ ಒಂದ ದಿವಸ ಸುಮ್ಮನ ಪೇಪರ ಓದ್ಕೊತ ಕೂತಾಗ ನನ್ನ ಹೆಂಡ್ತಿ ಸಟಕ್ಕನ್ನ “ರ್ರೀ.. ನೀವ ಯಾವಾಗ ಬ್ಯಾಂಕಾಕಗೆ ಹೋಗ್ತೀರಿ?” ಅಂತ ಕೇಳಿದ್ಲು. ನಂಗ ಒಮ್ಮಿಕ್ಕಲೇ ಗಾಬರಿ ಆತ, ಅಲ್ಲಾ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...