ಈಗ ಮೂರ ತಿಂಗಳ ಹಿಂದ ಯುಗಾದಿ ಟೈಮ ಒಳಗ ಹೊಸಾ ಪಂಚಾಂಗ ಬಂತ. ಹಂಗ ಯುಗಾದಿ ದಿವಸ ಪಂಚಾಂಗ ಪೂಜಾ ಮಾಡಿ ಒಂದ ಚೂರ ಓದಬೇಕಂತ, ಅದಕ್ಕ ನನ್ನ ಹೆಂಡತಿ ಪಂಚಾಂಗ ಹಿಡ್ಕೊಂಡ ಸೀದಾ ಶ್ರಾವಣ ಮಾಸ ಯಾವಾಗ ಬರ್ತದ, ಈ...
ಮೊನ್ನೆ ನನ್ನ ದೋಸ್ತನ ಮಗಂದ ಮುಂಜವಿ ಇತ್ತ. ಇನ್ನ ಅಂವಾ ನನಗ’ಲೇ…ನೀ ನಿಮ್ಮ ಫ್ಯಾಮಿಲಿ ಕರಕೊಂಡ ಬರಬೇಕ’ ಅಂತ ಭಾಳ ಒತ್ತಾಯ ಮಾಡಿ ಹೇಳಿದ್ದಕ್ಕ ನಾ ಹೆಂಡ್ತಿ ಮಗಳನ ಕರಕೊಂಡ ಹೋಗಿದ್ದೆ. ಹಂಗ ಅಂವಾ ಅಗದಿ ನಮ್ಮ ಫ್ಯಾಮಿಲಿ ಕ್ಲೋಸ್ ಫ್ರೆಂಡ್...
ಈಗ ಒಂದ ಐದ ತಿಂಗಳ ಹಿಂದ ನಮ್ಮ ಹಳೇ ಮನಿ ಕಡೆ ಇದ್ದ ಮಂಜು ಅಂತ ಹುಡುಗ ಒಬ್ಬೊಂವ ಹಡದಿದ್ದಾ, ಅಂದರ ಅವನ ಹೆಂಡ್ತಿ ಹಡದಿದ್ಲು. ಇನ್ನ ಅಕಿ ತವರ ಮನ್ಯಾಗ ಹಡದಿದ್ದಕ್ಕ ನಮಗ ಹೋಗಿ ಕೂಸಿನ ನೋಡ್ಲಿಕ್ಕೆ ಆಗಿದ್ದಿಲ್ಲಾ. ಹಿಂಗಾಗಿ...
ಇದ ಒಂದ ಹತ್ತ ಹದಿನೈದ ವರ್ಷದ ಹಿಂದಿನ ಮಾತ ಇರಬೇಕ, ಒಂದ ದಿವಸ ನಮ್ಮ ಕ್ಲಾಸಮೇಟ್ ಪಚ್ಯಾ ದುರ್ಗದಬೈಲನಾಗ ಭೆಟ್ಟಿ ಆಗಿದ್ದಾ. ಹಿಂಗ ಅದ ಇದ ಮಾತಾಡ್ತ ಮಾತಾಡ್ತ ಒಮ್ಮಿಕ್ಕಲೇ’ನಮ್ಮ ಮಾವಂದ ಮೊನ್ನೆ ಮೇ ಮುವತ್ತೊಂದಕ್ಕ ಮುಗಿತಪಾ’ ಅಂದಾ.ನಾ ಒಮ್ಮಿಕ್ಕಲೇ ಗಾಬರಿ...
ಸಿಂಧಕ್ಕಾ, ಸುದಕ್ಕಾ, ಸಾವಿತ್ರಿ ಮತ್ತ ಸುನಂದಾ ಇವರ ನಾಲ್ಕ ಮಂದಿ ಧಾರವಾಡದೊಳಗ ಒಂದ ಐವತ್ತೈದ- ಅರವತ್ತ ವರ್ಷದ ಹಿಂದಿನ ಗೇಳ್ತ್ಯಾರ. ಇವರೇಲ್ಲಾ ಹೆಬ್ಬಾರವರ ಪ್ರಿಂಟಿಂಗ್ ಪ್ರೆಸನಾಗ ಕೆಲಸಾ ಮಾಡ್ತಿದ್ದರ. ಅಗದಿ ಗಳಸ್ಯ-ಕಂಟಸ್ಯ ಅನ್ನೊ ಹಂತಾ ಗೆಳೆತನ. ಈಗ ಎಲ್ಲಾರೂ 75 ದಾಟಿದವರ.ಇನ್ನ...
ಹಿಂಗ ಮದ್ವಿ ಆಗಿ ಐದ ತಿಂಗಳ ತುಂಬಿ ಆರರಾಗ ಬಿದ್ದಿತ್ತ’ರ್ರಿ ಅಕ್ಷಯ ತ್ರಿತೀಯಾಕ್ಕ ಬಂಗಾರದ ಏನ ಮಾಡಸ್ತೀರಿ?’ ಅಂತ ಕೇಳಿದ್ಲು.’ಏ ನಾ ಏನ್ಮಾಡಸಬೇಕ ತಲಿ, ನಿಂಗ ಏನೇನ ಬಂಗಾರ ಬೇಕ ಅದನ್ನೇಲ್ಲಾ ವರದಕ್ಷೀಣಿ ಒಳಗ ತೊಗೊಂಡ ಬಾ ಅಂತ ಹೇಳಿದ್ನಿಲ್ಲ. ನಾ...
ನಾ ಸಣ್ಣಂವಾ ಇದ್ದಾಗಿಂದ ’ಬುದ್ದಿ ಎಲ್ಲೆ ಇಟ್ಟಿ, ಏಪ್ರಿಲ್ ಫೂಲ್ ಇದ್ದಂಗ ಇದ್ದಿ ನೋಡ ಮಗನ’…ಅಂತ ಒಬ್ಬರಿಲ್ಲಾ ಒಬ್ಬರಕಡೆ ಅನಿಸ್ಗೊಂಡಿದ್ದಕ್ಕ ಲೆಕ್ಕ ಇಲ್ಲಾ. ಒಂದ ಮನ್ಯಾಗ ನಮ್ಮವ್ವನ ಕಡೆಯಿಂದ ಸ್ಟಾರ್ಟ ಆಗಿದ್ದ ಮುಂದ ಸಾಲ್ಯಾಗ ಮಾಸ್ತರ, ಕಾಲೇಜನಾಗ ಪ್ರೊಫೆಸರ ರಿಂದ ಹಿಡದ...
ಹಂಗ ಇಕಿ ಒಮ್ಮಿಕ್ಕಲೇ ’ ನಾ ಈಗರ ಋಷಿಪಂಚಮಿ ಹಿಡಿಲೇನು?’ ಅಂತ ಕೇಳಲಿಕ್ಕೆ ಕಾರಣ ಅದ. ಅದ ಏನಪಾ ಅಂದರ ಹಿಂದಕ ಒಂದ ಹದಿನೈದ-ಹದಿನಾರ ವರ್ಷದ ಹಿಂದ ಒಂದ ಸರತೆ ನಮ್ಮ ಅನಸಕ್ಕಜ್ಜಿ ಋಷಿಪಂಚಮಿ ಉದ್ಯಾಪನಿಗೆ ನಾವ ದಂಪತ್ ಹೋಗಿ ಬಂದಾಗ...
ಮೊನ್ನೆ ನಾ ಮುಂಜಾನೆ ಆಫೀಸಿಗೆ ಹೋಗೊ ಪುರಸತ್ತ ಇಲ್ಲದ ನಮ್ಮ ಅಕೌಂಟೆಂಟ್ ಮಂಜುಳಾ’ಏನ್ ಸರ್ ನಿನ್ನೆ ಪಾರ್ಟಿ ಜೋರ್ ಇತ್ತೇನ’ ಅಂದ್ಲು. ನಂಗ ನೋಡಿದರ ಇನ್ನೂ ಹಿಂದಿನ ದಿವಸದ ಪಾರ್ಟಿ ಹ್ಯಾಂಗ್ ಒವರ್ ಇಳದಿದ್ದಿಲ್ಲಾ ಅಷ್ಟರಾಗ ಇಕಿಗೆ ಹೆಂಗ ಗೊತ್ತಾತ ಅಂತ...
ಈಗ ಒಂದ ಮೂರ ತಿಂಗಳ ಹಿಂದ ಒಂದ ಹೊಸಾ ಸ್ಮಾರ್ಟ ಫೋನ ತೊಗೊಂಡಿದ್ದೆ. ಹಂಗ ಒಂದೂ ಮನ್ಯಾಗ ಸ್ಮಾರ್ಟ ಹೆಂಡ್ತಿನರ ಇರಬೇಕ, ಇಲ್ಲಾ ಸ್ಮಾರ್ಟ ಫೋನರ ಇರಬೇಕ ಅಂತಾರ ಖರೆ ಆದರ ಯಾವಾಗ ಸ್ಮಾರ್ಟ ಫೋನ್ ಸ್ಮಾರ್ಟ ಹೆಂಡ್ತಿಕಿಂತಾ ಜಾಸ್ತಿ ಅನಿವಾರ್ಯ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...